ಮುಂಭರುವ Karnataka Teacher Eligibility Test (
K-TET) ನಮ್ಮ ಜೀವನದಲ್ಲಿ ತುಂಬಾ ಮುಖ್ಯವಾಗಿದೆ. ಈ ಪರೀಕ್ಷೆ ಉತ್ತಮ ಶಿಕ್ಷಕರಾಗಿ ಬೆಳೆಯಲು, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು, ನಮ್ಮ ಭವಿಷ್ಯವನ್ನು ಬಲಪಡಿಸಲು ಸುವರ್ಣ ಅವಕಾಶ ನೀಡುತ್ತದೆ.
K-TET ಅನ್ನು ಯಶಸ್ವಿಯಾಗಿ ಪಾಸ್ ಮಾಡುವ ಮೂಲಕ, ನಾವು ಶಿಕ್ಷಕರಾಗಿ ಅರ್ಹತೆಯನ್ನು ಪ್ರಮಾಣೀಕರಿಸಬಹುದು, ಮತ್ತು ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಉತ್ತಮ ಸೇವೆ ಸಲ್ಲಿಸಲು ಅವಕಾಶವನ್ನು ಪಡೆಯಬಹುದು. ಇದು ಕೇವಲ ಪರೀಕ್ಷೆ ಅಲ್ಲ, ನಮ್ಮ ಕೌಶಲ್ಯ, ಜ್ಞಾನ ಮತ್ತು ಶೈಕ್ಷಣಿಕ ಸಾಮರ್ಥ್ಯವನ್ನು ತೋರಿಸುವ ವೇದಿಕೆ.
ಈ ಸಂಚಿಕೆ ಯಲ್ಲಿ ನಾವು K-TET ಅಪ್ಲೈ ಮಾಡಲು ಹಂತ ಹಂತದ ಮಾರ್ಗದರ್ಶನ + ಚಿತ್ರಗಳೊಂದಿಗೆ ವಿವರವಾಗಿ ತಿಳಿದುಕೊಳ್ಳೋಣ, ಅರ್ಜಿ ಸಲ್ಲಿಸುವ ಪ್ರಕ್ರಿಯೆ ಸರಳವಾಗಿರುತ್ತದ
++++++++++++++++++++++++++++++++++++++++
ಯಾವುದಾದರೂ ಒಂದು ಗೂಗಲ್ ಅಥವಾ ಕ್ರೋಮ್ ಓಪನ್ ಮಾಡಿ https://schooleducation.kar.nic.in/ ಅಂತ ಟೈಪ್ ಮಾಡಿ ಕ್ಲಿಕ್ ಮಾಡಿ ಅಲ್ಲಿ ನಮಗೆ
Application for Karnataka teacher eligibility test 2025 ಅಂತ ಇರುತ್ತೆ ಅದನ್ನು ಕ್ಲಿಕ್ ಮಾಡಿ ಕ್ಲಿಕ್ ಮಾಡಿದ ನಂತರ ಈ ತರ ಓಪನ್ ಆಗುತ್ತೆ
ಇಲ್ಲಿ ನಮಗೆ login, forget password,new user ಮೂರು ಆಯ್ಕೆಗಳು ಬರುತ್ತೆ new user ಕ್ಲಿಕ್ ಮಾಡಿ ಕ್ಲಿಕ್ ಆದಮೇಲೆ ಈ ತರ ಓಪನ್ ಆಗುತ್ತೆ
ಇಲ್ಲಿ ಎಲ್ಲಾ ಇನ್ಫಾರ್ಮಶನ್ ಫೀಲ್ ಮಾಡಿ applicant name, aadhaar number, confirm adhaar number, mobile number, email, user name ಹಾಕಬೇಕು user name ಅಂದರೆ ನಾವು ಲಾಗಿನ್ ಆಗೋಕೆ ಬೇಕಾರುವ ನೇಮ್ ವಾಗಿರುತ್ತೆ ಉದಾಹರಣೆ: RavikumarJK, ಮತ್ತು ನಿಮಗೆ ನೆನಪುನಲ್ಲಿ ಇಟ್ಟುಕೊಳ್ಳುವ ಪಾಸ್ವರ್ಡ್ ಹಾಕಿ ಉದಾ:Ravi@123, ಮತ್ತೆ confirm password ಕೊಟ್ಟು get OTP ಮೇಲೆ ಕ್ಲಿಕ್ ಮಾಡಿ.
OTP ಇಲ್ಲಿ ಹಾಕಿದಮೇಲೆ save ಅಂತ ಕೊಡಿ save ಅಂತ ಕೊಟ್ಟಮೇಲೆ ಈ ತರ ಕಾಣುತ್ತಿರಾ
ಪುನಃ ಲಾಗಿನ್ ಪುಟಕ್ಕೆ ಬರುತ್ತಿರಿ ಮೊದಲಿನಲ್ಲಿ ಹಾಕಿರುವ user name ಮತ್ತು password ಹಾಕಿ ಲಾಗಿನ್ ಮೇಲೆ ಕ್ಲಿಕ್ ಮಾಡಿ
ಇಲ್ಲಿ ನಿಮಗೆ SSLC details ಕೇಳುತ್ತೆ ಅಂದರೆ
kseed ಮತ್ತು
kseab ನಲ್ಲಿ ಇದರಲ್ಲಿ ಯುವುದು sslc ಆಗಿರುತ್ತೆ yes or no ಅಂತ ಕೊಟ್ಟು sslc ನೋಂದಣಿ ಸಂಖ್ಯೆ ಹಾಕಿ save button ಕ್ಲಿಕ್ ಮಾಡಿ.
ಇಲ್ಲಿ sslc ನೋಂದಣಿ ಸಂಖ್ಯೆ ಹಾಕಿದ ಬಳಿಕ Auto fetch ಆಗುತ್ತೆ ಅಂದರೆ ನಿಮ್ಮ ಎಲ್ಲಾ sslc ಇರುವಂತೆ fill ಆಗಿರುತ್ತೆ ಅದು ಆದ ಬಳಿಕ ನೀವು ಏನಾದರೂ ಅಂಗವಿಕಲತೆ ಹೊಂದಿದರೆ ನೀವು yes or no ಅಂತ ಕೊಟ್ಟು save ಅಂತ ಕೊಡಿ
ಆಗ ನೀವು ಎಜುಕೇಶನ್ ಕ್ವಾಲಿಫಿಕೇಷನ್ ಗೆ ಬರುತ್ತೀರಾ ಅಲ್ಲಿ ನಿಮ್ಮ sslc,
puc,degree ಅಂತ ಕೊಟ್ಟಿದಾರೆ ಅದನ್ನು ನೀವು ಸಲೆಕ್ಟ್ ಮಾಡಬೇಕು.ನಂತರ save ಕೊಡಿ ನಂತರ ಕೆಳಗೆ ನೀವು ಏನಾದರು puc D. Ed, ಮಾಡಿದರೆ ಸಲೆಕ್ಟ್ ಮಾಡಬೇಕು, ಇಲ್ಲ ಎರಡು ವರ್ಷ
BA B. ED ಮಾಡಿದರೆ ಅದನ್ನು ಸಲೆಕ್ಟ್ ಮಾಡಿ save ಮೇಲೆ ಕ್ಲಿಕ್ ಮಾಡಿ. ನಂತರ ಈ ತರ ಪೇಜ್ ಓಪನ್ ಆಗುತ್ತೆ
Eligibility Test details ಅಂತ ಬರುತ್ತೆ ಅಲ್ಲಿ ನಾವು ಯಾವ ಪೇಪರ್ ಬರಿಯುತ್ತಿರಿ ಅಂತ ಕೊಟ್ಟಿದಾರೆ ಪೇಪರ್ 1, ಪೇಪರ್ 2 ಎರಡು ಬರೀತೀನಿ ಅಂದರೆ ಎರಡು ಕ್ಲಿಕ್ ಮಾಡಬೇಕು ಇಲ್ಲ ಅಂದರೆ ಪೇಪರ್ 2 ಮಾತ್ರ ನಾವು ಜಾಸ್ತಿ ಮಾರ್ಕ್ಸ್ ತಗೋಬೇಕು ಅಂದರೆ paper 2 ಮಾತ್ರ ಸಲೆಕ್ಟ್ ಮಾಡಬೇಕು ಸಲೆಕ್ಟ್ ಕೊಟ್ಟ ಮೇಲೆ save ಮೇಲೆ ಕ್ಲಿಕ್ ಮಾಡಿ.
ಮುಂದೆ ನಾವು ಫೋಟೋ ಮತ್ತು ಸಹಿ ಕೂಡ ಅಪ್ಲೋಡ್ ಮಾಡಬೇಕು ಒಂದು ನೆನಪಿನಲ್ಲಿ ಇಟುಕೊಳ್ಳಿ ಫೋಟೋ 50 kb ಒಳಗೆ ಇರಬೇಕು ಮತ್ತು ಸಹಿ 40 kb ಒಳಗೆ ಇರಬೇಕು ಆಗ ಮಾತ್ರ ಅಪ್ಲೋಡ್ ಮಾಡಲು ಸಾಧ್ಯ.
ಇದಾದ ಬಳಿಕ ಲಾಸ್ಟ ಇದೆಲ್ಲ ಕರೆಕ್ಟ್ ಇದೇ ಇಲ್ವಾ ಅಂತ ಚೆಕ್ ಮಾಡಿ ಅಲ್ಲಿ ಚೌಕ ಮೇಲೆ ಟಿಕ್ ಮಾಡಿ sumbit ಅಂತ ಕೊಡಬೇಕು.ಕೊಟ್ಟ ಆದ ಮೇಲೆ ಪೇಮೆಂಟ್ ಒಪ್ಶನ್ ಗೆ ಕರೆದುಕೊಂಡು ಹೋಗುತ್ತೆ.
ಇಲ್ಲಿ ನಾವು pay now ಮೇಲೆ ಕ್ಲಿಕ್ ಮಾಡಿ ನಾವು ಯಾವ ಬೇಕಾದರೂ ಪೇಮೆಂಟ್ ಮಾಡಬಹುದು ಅಂದರೆ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್,
upi, ಬ್ಯಾಂಕ್ ಚನೆಲ್ ಮೂಲಕ ನಾವು ಹಣ ತುಂಬಬಹುದು. ತುಂಬಿದ ಮೇಲೆ ಮತ್ತೆ ನಾವು ಲಾಗಿನ್ ಪುಟಕ್ಕೆ ಹೋಗಿ
ಅಲ್ಲಿ user name ಮತ್ತು password ಹಾಕಿ ಲಾಗಿನ್ ಆಗಿ ಅಲ್ಲಿ ನಿಮಗೆ ಪ್ರಿಂಟ್ ಒಪ್ಶನ್ ಕಾಣುತ್ತೆ ಅದರ ಮೇಲೆ ಕ್ಲಿಕ್ ಮಾಡಿ ಪ್ರಿಂಟನ್ನ ತೆಗೆದುಕೊಳ್ಳಬಹುದು.
ಇದರಲ್ಲಿ ಏನಾದರೂ ಸಮಸ್ಯೆಗಳು ಗೊಂದಲ ಗಳು ಇದ್ದರೆ gmail id ಮೂಲಕ ಲಾಗಿನ್ ಆಗಿ ನಿಮ್ಮ ಕಾಮೆಂಟ ಮೂಲಕ ತಿಳಿಸಬಹುದು. ಹಾಗೆ ಈ ಪೇಜ್ ಫಾಲೋ ಮಾಡಿ.